ದಂಗಲ್ ಚಿಚೋರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ ನಿತೇಶ್‌ತಿವಾರಿ ಅವರು ಮಹಾದೃಷ್ಯಕಾವ್ಯವಾದ ರಾಮಾಯಣವನ್ನು ನಿರ್ದೆಶನ ಮಾಡಿದ್ದಾರೆ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ರಣಬೀರ್ ಕಪೂರ್ ರಾಮಾನಾಗಿ, ಹಾಗೂ ಸಾಯಿಪಲ್ಲವಿ ಸೀತಾದೇವಿಯಾಗಿ ಪಾತ್ರವನ್ನು ನಿಭಾಯಿಸಲಾಗಿದೆ, ಇನ್ನು ಹಲವಾರು ತಾರಾಗಣವಿದೆ ಅದರೆ ಸರಿಯಾಗಿ ರಿವಿಲ್ ಮಾಡಿಲ್ಲ, ಯಾರು ಯಾವ ಪಾತ್ರ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ.
ರಾಮಾಯಣ ಟೀಸರ್ Ramayana 3 Minutes Teaser

ಇತ್ತಿಚೆಗಷ್ಟೆ ಬಿಡುಗಡೆ ಮಾಡಿದ ಜುಲೈ 3ರಲ್ಲಿ ಬಿಡುಗಡೆಯಾದ 3 ನಿಮಿಷದ ರಾಮಾಯಣದ ಟೀಸರ್ ಅಲ್ಲಿ ರಾಮಾ ಯಾರು ರಾವಣ ಯಾರು ಸೀತಾದೇವಿ ಯಾರು ಎಂದು ರಿವಿಲ್ ಮಾಡಿದ್ದಾರೆ. VFX ತಾಂತ್ರಿಕ ವರ್ಗದವರನ್ನು ಹೊರದೇಶದಿಂದ ಕರೆಸಲಾಗಿದೆ, ದೃಶ್ಯಾವಳಿಯಂತು ಬಹಳ ಚೆನ್ನಾಗಿ ಮೂಡಿ ಬಂದಿದೆ.
ಈ ಚಿತ್ರಕ್ಕೆ ಬರೋಬ್ಬರಿ 4,000 ಕೋಟಿ ಬಂಡವಾಳ ಹಾಕಲಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಇದೇಮೊದಲು ಈ ಲೆವೆಲ್ ಗೆ
ರಾವಣ ಮತ್ತು ರಾಮನ ಯುಧ್ದವೈಭವನ್ನು ದೃಶ್ಯಾವಳಿಗಳ ಮೂಲಕ ಕಣ್ಣು ತುಂಬಿಕೋಳ್ಳಬಹುದಾಗಿದೆ.
ಇದಂತು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡಲಾಗಿದೆ ಎಂದು ಬಾಸವಾಗುತ್ತಿದೆ. ಅಸ್ಕರ್ ಅವಾರ್ಡ್ ಪಡೆದ ಟೆಕ್ನೀಕಲ್ ಟೀಮ್ ಕೆಲಸ ಮಾಡಿದ್ದಾರೆ ಎಂದರೆ ಸಾಮಾನ್ಯವಾಗಿರುತ್ತಾ ಹೇಳಿ, ಇಡೀ ಚಿತ್ರವು ಭಾರತೀಯ ಪೌರಾಣಿಕ ಚಿತ್ರರಂಗಕ್ಕೆ ಹೊಸ ದಿಕ್ಕು ತರಲಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರ ಮಾಡುತ್ತಾ ಇದ್ದರೂ ರಾವಣ ಏನು ಸಾಮಾನ್ಯವಾದವನಲ್ಲ
ಮಹಾಶಿವಭಕ್ತ ವೇದ ಶಾಸ್ತ್ರದಲ್ಲಿ ಮೇದಾವಿ ಶ್ರೀಲಂಕಾದ ರಾಜಕುಮಾರ, ಹತ್ತುತಲೆಗಳುಳ್ಳ ಮಹಾ ಬುದ್ದಿವಂತ ರಾವಣನ ನೋಟದಲ್ಲಿ ರಾಮಾಯಣ
ಈ ಸಿನಿಮಾವನ್ನು ನಿಮಿತ್ ಮಲ್ಹೋತ್ರಾ, ಯಶ್, ಇವರ ಜೊತೆ ರಣಬೀರ್ ಕಪೂರ್, ಮೊದಲಾದವರು ಬಂಡವಾಳ ಹೂಡಿದ್ದಾರೆ, ಪ್ರೇಕ್ಷಕರು ಕಾಯತ್ತಾ ಕುಳಿತ್ತಿದ್ದಾರೆ ಯಾವಾಗ ಈ ಮಹಾದೃಶ್ಯ ಕಾವ್ಯವನ್ನು ತೆರೆಯ ಮೇಲೆ ನೋಡುವುದು ಅಂತ
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ click ಮಾಡಿ